ಕೇರಳ & ಕರ್ನಾಟಕ PSC ಸ್ಪರ್ಧಾ ಮಿತ್ರ, ಕಾಸರಗೋಡು

Full width home advertisement

Post Page Advertisement [Top]

  1. 12 ವರ್ಷಗಳಿಗೊಮ್ಮೆ ಕೇರಳದ ಭಾರತ ಹೊಳೆಯ ದಡದಲ್ಲಿ ನಡೆಯುತ್ತಿದ್ದ ಐತಿಹಾಸಿಕ ಉತ್ಸವ ಯಾವುದು?

    ಮಾಮಾಂಗಂ

  2. ಕೊನೆಯ ಮಾಮಾಂಗಂ ನಡೆದ ವರ್ಷ ಯಾವುದು?

    1743

  3. ಮಾಮಾಂಗಂ ಎಲ್ಲಿ ಆಚರಿಸಲಾಗುತ್ತಿತ್ತು?

    ತಿರುನಾವಾಯದ ಮುಕುಂದ ದೇವಾಲಯದ ಮುಂಭಾಗದಲ್ಲಿರುವ ಮರಳದಂಡೆಯಲ್ಲಿ

  4. ಪೆರುಮಾಳ್‌ ಮೆಕ್ಕಾಗೆ ಹೋದಾಗ ಮಾಮಾಂಗಂ ಉತ್ಸವವನ್ನು ನಡೆಸಲಿರುವ ಅಧಿಕಾರ ಯಾರಿಗೆ ಲಭಿಸಿತು?

    ವಳ್ಳುವಕೋನಾತಿರಿಗೆ

  5. ಮಾಮಾಂಗಂ ಉತ್ಸವ ಆಚರಣೆಯಲ್ಲಿ ಸಾಮೂದಿರಿಯ ಅಧ್ಯಕ್ಷತೆಯನ್ನು ಪ್ರಶ್ನಿಸಿ "ಚಾವೇರ್‌ಪ್ಪಡೆ "ಯನ್ನು ಕಳುಹಿಸುತ್ತಿದ್ದವರು ಯಾರು?

    ವಳ್ಳುವಕೋನಾತಿರಿ

  6. ಕಾವುಗಳಲ್ಲಿ, ದೈವಸ್ಥಾನಗಳಲ್ಲಿ, ತರವಾಡುಗಳಲ್ಲಿ ನಡೆಸುವ ದೈವಕೋಲ (ತೆಯ್ಯಂ) ಗಳಿಗೆ ಸಾಮಾನ್ಯವಾಗಿ ಹೇಳುವ ಹೆಸರೇನು?

    ಕಳಿಯಾಟ್ಟಂ

  7. ಸ್ವಾತಿ ತಿರುನಾಳ್‌ ಶತಾಬ್ದಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಸರ್‌ ಸಿ.ಪಿ ರಾಮಸ್ವಾಮಿಯವರನ್ನು ಆಕ್ರಮಿಸಿ ಗಾಯಗೊಳಿಸಿದ್ದು ಯಾರು?

    ಕೆ ಸಿ ಎಸ್‌ ಮಣಿ

  8. ಸರ್‌ ಸಿ.ಪಿ ರಾಮಸ್ವಾಮಿ ಅಯ್ಯರ್‌ ರಾಜಿನಾಮೆ ನೀಡಿದ ಬಳಿಕ ದಿವಾನ್‌ ಸ್ಥಾನ ಪಡೆದವರು ಯಾರು?

    ಪಿ ಜಿ ಎನ್‌ ಉಣ್ಣಿತ್ತಾನ್‌

  9. ತಿರುವಿದಾಂಕೂರಿನ ರಾಜ್ಯದ ಕೊನೆಯ ಮಹಾರಾಜ ಯಾರು?

    ಶ್ರೀ ಚಿತ್ತಿರ ತಿರುನಾಳ್‌

  10. ವಿದ್ಯಕೊಂಡ್‌ ಪ್ರಬುದ್ಧರಾಗುಗ, ಸಂಘಟನಯಿಲೂಡೆ ಶಕ್ತರಾಗುಗ” ಎಂಬ ಸಂದೇಶವನ್ನು ನೀಡಿದವರು ಯಾರು?

    ಶ್ರೀ ನಾರಾಯಣ ಗುರು

  11. ಗದ್ದೆ ಕೊಯ್ಲು ಮಾಡುವಾಗ ಕೇರಳದ "ಪಳ್ಳುವ" ಜನಾಂಗದವರು ಗದ್ದೆಗಳಲ್ಲಿ ಹಾಡುವ ಪದ್ಯಕ್ಕೆ ಹೇಳುವ ಹೆಸರೇನು?

    ಕಟ್ಟಪ್ಪಾಟ್‌

  12. ಕೇರಳದ ಮೊದಲ ಮುಖ್ಯಮಂತ್ರಿ ಯಾರು?

    ಇ ಎಂ ಎಸ್‌ ನಂಬೂದಿರಿಪ್ಪಾಡ್‌

  13. ಕೇರಳದ ಮೊದಲ ಮುಖ್ಯಮಂತ್ರಿಯಾಗಿ ಇ ಎಂ ಎಸ್‌ ನಂಬೂದಿರಿಪ್ಪಾಡ್‌ ಅಧಿಕಾರಕ್ಕೆ ಬಂದದ್ದು ಯಾವಾಗ?

    1957 ಏಪ್ರಿಲ್‌ 15 ರಂದು

  14. ಕೇರಳದ ಮೊದಲ ಕಮ್ಯೂನಿಷ್ಟ್‌ ಮಂತ್ರಿಮಂಡಲವನ್ನು ವಿಸರ್ಜಿಸಿದ್ದು ಯಾವಾಗ?

    1959 ಜುಲೈ 31 ರಂದು

  15. ವಾಸ್ಕೋಡಿಗಾಮ ಕೋಝಿಕ್ಕೋಡ್‌ನಲ್ಲಿ ಹಡಗು ಇಳಿದದ್ದು ಯಾವಾಗ?

    1498 ಮೇ 31 ರಂದು

  16. ವಿಸ್ತಾರವಾಗಿ ಮತ್ತು ವೈಜ್ಞಾನಿಕವಾಗಿ ಕೃಷಿಯನ್ನು ಆರಂಭಿಸಿದ ವಿದೇಶಿಗರು ಯಾರು?

    ಪೋರ್ಚುಗೀಸರು

  17. ಹುರಿಹಗ್ಗ ರಫ್ತು ಆರಂಭಿಸಿದ್ದು ಯಾರು?

    ಪೋರ್ಚುಗೀಸರು

  18. ಪೋರ್ಚುಗೀಸರು ಕೇರಳದಲ್ಲಿ ಆರಂಭಿಸಿದ ಕೃಷಿಗಳು ಯಾವುವು?

    ಹೊಗೆಸೊಪ್ಪು, ಗೇರುಬೀಜ, ಪೇರಳೆ, ಹತ್ತಿ ಇತ್ಯಾದಿ

  19. ಕೇರಳದಲ್ಲಿ ಮುದ್ರಣಾಲಯವನ್ನು ಆರಂಭಿಸಿದ್ದು ಯಾರು?

    ಪೋರ್ಚುಗೀಸರು

  20. ಕೇರಳದಲ್ಲಿ ಪೋರ್ಚುಗೀಸರು ಮುದ್ರಣಾಲಯ ಆರಂಭಿಸಿದ ಪ್ರದೇಶಗಳು ಯಾವುದೆಲ್ಲಾ?

    ಕೊಚ್ಚಿ ಮತ್ತು ವೈಪಿನ್‌ಕೋಟ್ಟ

  21. ಕೇರಳ ಭೂ ಸುಧಾರಣಾ ಕಾನೂನು ಯಾವ ಸರಕಾರದ ಕಾಲದಲ್ಲಿ ಅನುಮೋದಿಸಲಾಯಿತು?

    1967 ರ ಇ ಎಂ ಎಸ್‌ ನಂಬೂದಿರಿಪ್ಪಾಡ್‌ ಸರಕಾರ

  22. ಕೇರಳ ಭೂ ಸುಧಾರಣಾ ಕಾನೂನು ಯಾವ ಸರಕಾರದ ಕಾಲದಲ್ಲಿ ಜ್ಯಾರಿಗೆ ಬಂತು?

    ಸಿ ಅಚ್ಯುತ‌ ಮೇನೋನ್ ಸರಕಾರ

  23. ಒಂದು ಲಕ್ಷದ ಇಪ್ಪತೈದು ಸಾವಿರ ಶ್ಲೋಕಗಳಿಂದ ಕೂಡಿದ ಮಹಾಭಾರತವನ್ನು 874 ದಿನಗಳಲ್ಲಿ ಮಲೆಯಾಳಂಗೆ ಅನುವಾದಿಸಿದ ರಾಮವರ್ಮ ಇವರ ಕಾವ್ಯನಾಮವೇನು?

    ಕೊಡುಙಲ್ಲೂರ್‌ ಕುಞ್ಞಿಕುಟ್ಟನ್‌ ತಂಬುರಾನ್‌

  24. ಕರ್ಷಕಭಂದ ನಿಯಮಂ" ಯಾವ ವರ್ಷದಲ್ಲಿ ಅನುಮೋದಿಸಲಾಯಿತು?

    1959

  25. ತಿರುವನಂತಪುರಂ ದೊಡ್ಡ ಅರಮನೆಯಲ್ಲಿ ರಾಜಕೀಯ ಕೈದಿಯಾಗಿ ಸೆರೆಮನೆವಾಸ ಅನುಭವಿಸಿದ್ದು ಯಾರು?

    ಉಣ್ಣಿ ಕೇರಳವರ್ಮ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Bottom Ad [Post Page]